ಬಿಳಿಂಜರ್
ಕ್ಲೂಪ್ಯಿಯಿಫಾರ್ಮೀಸ್ ಗಣದ ಕ್ಲೂಪ್ಯೆಯಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ಮೂಳೆಮೀನು, ಹೆರಿಂಗ್, ಸಾರ್ಡೀನ್ ಮೀನುಗಳ ಸಂಬಂಧಿ. ಕ್ಲೂಪಿಯ ಟೋಲಿ ಅಥವಾ ಹಿಲ್ಸ ಟೋಲಿ ಇದರ ಶಾಸ್ತ್ರೀಯ ಹೆಸರು. ಬೆಳ್ಳಿ ಬಣ್ಣದ ಮೀನಿದು; ಸುಮಾರು 60-90 ಸೆಂಮೀ ಉದ್ದ ಬೆಳೆಯುತ್ತದೆ. ದೇಹ ಚಪ್ಪಟೆಯಾಗಿದ್ದು, ಕೆಳಭಾಗ ಗರಗಸದಂತಿದೆ. ದೇಹದ ಹುರುಪಗಳು ದೊಡ್ಡಗಾತ್ರದವು. ಹಲ್ಲುಗಳು ಇದ್ದರೆ ಅತಿ ಸಣ್ಣವು ಮತ್ತು ಆಗಿಂದಾಗ್ಗೆ ಉದುರಿ ಹೋಗುವುವು. ಬಾಯಿ ಅಗಲ. ಗುದ ಭಾಗದ ಈಜುರೆಕ್ಕೆಯಲ್ಲಿ 30 ಮೂಳೆ ಕಡ್ಡಿಗಳಿವೆ. ಬಾಲದ ಈಜುರೆಕ್ಕೆ ಕವಲೊಡೆದಿದೆ. ಗಾಳಿಯ ಚೀಲ ದೊಡ್ಡದಾಗಿದ್ದ ಕಿವಿಯೊಂದಿಗೆ ಸಂಪರ್ಕ ಪಡೆದಿದೆ. ಗುಜರಾತ್, ಮಹಾರಾಷ್ಟ್ರ ಕರಾವಳಿಗಳಲ್ಲಿ ಇದು ಹೆಚ್ಚು ವ್ಯಾಪಕವಾಗಿ ಕಾಣದೊರೆಯುತ್ತಿದ್ದು ಅಲ್ಲಿಯ ಮತ್ಸೋದ್ಯಮದಲ್ಲಿ ಪ್ರಮುಖವೆನಿಸಿದೆ.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ